Thursday, January 28, 2010

DazZliNg FlowErS At LalBaGH!!!





ಫಲ ಪುಷ್ಪ ಪ್ರದರ್ಶನ


ಎಂದಿನಂತೆ ಈ ವರ್ಷವು ಸಹ ಗಣರಾಜ್ಯೋತ್ಸವದ ಪ್ರಯುಕ್ತ ನಗರದ ಸಸ್ಯಕಾಶಿ ಎಂದೇ ಪ್ರಸಿದ್ದಿಯಾಗಿರುವ ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ಫಲ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು .
ಗುಲಾಬಿ ಹೂಗಳಿಂದ ನಿರ್ಮಿಸಿದ ಕುತಬ್ ಮಿನಾರ್ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿತ್ತು .
೧೫೦೦ ಬಗೆಯ ಹೂಗಳ ಪ್ರದರ್ಶನ ಕಣ್ಣಿಗೆ ಹಬ್ಬವಾಗಿತ್ತು. :)

ಕರೆಯಿತು ಸಸ್ಯಕಾಶಿ ಗಣರಾಜ್ಯದಿನದಂದು
ಗಾಜಿನಮನೆಯಲ್ಲಂದು ಎತ್ತನೋಡಿದರತ್ತ ಸಾವಿರಾರು ಪುಷ್ಪಗಳು
ನಯನಮನೋಹರ ಕುತಬ್ ಮಿನಾರ್ ಆ ದಿನದ ಆಕರ್ಷಣೆ !
ಕಣ್ಣು ತಂಪಾಗಿಸುವ ಪುಷ್ಪಗಳಿಂದ ಅಲಂಕೃತಗೊಂಡ
ದಸರೆಯ ಬೊಂಬೆಗಳು, ಹೋಳಿಯ ರಂಗುಗಳು
ನೆನೆಪಿಸಿದವು ನನಗೆ ಬಾಲ್ಯದ ದಿನಗಳನು ... :)





- ತನುಜ

ಮಕರ ಸಂಕ್ರಮಣ

ಬಂದಿದೆ ಮಕರ ಸಂಕ್ರಮಣ
ತಂದಿದೆ ಬೆಳೆಗಳ ಸುಗ್ಗಿಯ
ಎಳ್ಳು ಬೆಲ್ಲ ಕಬ್ಬನು ಬೀರುತ ..
ಒಳ್ಳೆಯ ಮಾತಾಡೆಂದು ಹರಸುತ ..
ನಮ್ಮೊಳಗಿನ ಅರಿವಿನ ಬೆಳಕನು ಪ್ರಜ್ವಲಿಸುತ ..
ಹೊಸಕಾಂತಿ ತರುವ ಹರುಷದಲಿ ..
ಬನ್ನಿ ಆಚರಿಸೋಣ ಸಡಗರದ ಸಂಕ್ರಾಂತಿಯ .. :)


ತನುಜ ಯದುಪತಿ

ಹೊಸವರುಷ

ಹೊರಟಿದೆ ಪಯಣ ಹೊಸವರುಷಕೆ
ಕಹಿನೆನಪುಗಳ ಮರೆಯುವಲಿ,
ಹೊಸಕನಸುಗಳ ಸಾಗರಕೆ ...
ನನಸಾಗಿಸುವ ಹಾರೈಕೆಯಲಿ ...
ಇರುಳು ಕತ್ತಲೆಯಿಂದ ...
ಬೆಳಕು ಬೆಳದಂಗಳಕೆ ...
ಹೊರಟಿದೆ ಪಯಣ ಹೊಸವರುಷಕೆ ...


ತನುಜ ಯದುಪತಿ